ನಮ್ಮ ಬಗ್ಗೆ

1.            ಕರ್ನಾಟಕ ರಾಜ್ಯಪತ್ರದಲ್ಲಿನ ಎಲ್ಲಾ ಅಧಿಸೂಚನೆಗಳನ್ನು, ನಿರ್ದೇಶಕರು, ಮುದ್ರಣ, ಲೇಖನ ಸಾಮಗ್ರಿ ಮತ್ತು ಪ್ರಕಟಣೆಗಳ ಇಲಾಖೆ ಇವರೇ ಸಂಕಲನಾಧಿಕಾರಿಯಾಗಿ, ಕರ್ನಾಟಕ ರಾಜ್ಯಪತ್ರವನ್ನು ಅಧಿಕೃತವಾಗಿ ಪ್ರಕಟಿಸುತ್ತಾರೆ. ಹಾಗೂ ಈ ರಾಜ್ಯಪತ್ರದ ಮುದ್ರಿತಪ್ರತಿಗಳನ್ನು ಎಲ್ಲಾ ಇಲಾಖೆಗಳಿಗೆ ಸರಬರಾಜು ಮಾಡಲಾಗುತ್ತಿದ್ದು, ಕರ್ನಾಟಕ ರಾಜ್ಯಪತ್ರದ ಎಲ್ಲಾ ಭಾಗಗಳನ್ನು ಕರ್ನಾಟಕ ರಾಜ್ಯಪತ್ರದ ಜಾಲತಾಣದಲ್ಲಿಯೂ ಸಹ ಅಧಿಕೃತವಾಗಿ ಅಪ್ಲೋಡ್ಮಾಡಲಾಗುತ್ತಿದೆ. ಇದನ್ನು ಸಾರ್ವಜನಿಕರು ಯಾವುದೇ ಶುಲ್ಕವಿಲ್ಲದೇ ಉಚಿತವಾಗಿ ವೀಕ್ಷಿಸಬಹುದು.

2.            ಕರ್ನಾಟಕ ರಾಜ್ಯಪತ್ರವು 155 ವರ್ಷಗಳ ಇತಿಹಾಸವನ್ನು ಹೊಂದಿದೆ. ಮೊದಲ ಬಾರಿಗೆ ರಾಜ್ಯಪತ್ರವು 1866 ರಲ್ಲಿ ಮೈಸೂರು ರಾಜ್ಯಪತ್ರವಾಗಿ ಪ್ರಕಟಿತವಾಯಿತು. ಸ್ವಾತಂತ್ರ್ಯಾನಂತರದಲ್ಲಿ ಮೈಸೂರು ರಾಜ್ಯಪತ್ರವೆಂದೂ, ನಂತರ ನವೆಂಬರ್ 1973 ರಿಂದ ಮೈಸೂರು ರಾಜ್ಯವನ್ನು ಕರ್ನಾಟಕ ರಾಜ್ಯವೆಂದು ನಾಮಕರಣ ಮಾಡಿದಾಗಿನಿಂದ ಕರ್ನಾಟಕ ರಾಜ್ಯಪತ್ರವೆಂದು ನಿಯಮಿತವಾಗಿ ಇಂದಿನವರೆಗೂ ಪ್ರಕಟಿಸಲಾಗುತ್ತಿದೆ.

3.            ನಿರ್ದೇಶಕರು, ಮುದ್ರಣ ಲೇಖನ ಸಾಮಗ್ರಿ ಮತ್ತು ಪ್ರಕಟಣೆಗಳ ಇಲಾಖೆ, ಕರ್ನಾಟಕ ಸರ್ಕಾರ ಇವರು ಕರ್ನಾಟಕ ರಾಜ್ಯಪತ್ರದ ಸಂಕಲನಾಧಿಕಾರಿಗಳು, ಪ್ರಕಾಶಕರು ಹಾಗೂ ಮುದ್ರಕರಾಗಿರುತ್ತಾರೆ.ಜಂಟಿ ನಿರ್ದೇಶಕರು, ಸರ್ಕಾರಿಮುದ್ರಣಾಲಯ, ವಿಕಾಸಸೌಧಘಟಕ, ಬೆಂಗಳೂರು, ಉಪನಿರ್ದೇಶಕರು, ಸರ್ಕಾರಿ ಕೇಂದ್ರ ಮುದ್ರಣಾಲಯ, ಬೆಂಗಳೂರು ಹಾಗೂ ಮೂರು ವಿಭಾಗೀಯ ಮುದ್ರಣಾಲಯಗಳ ಉಪನಿರ್ದೇಶಕರು, ರಾಜ್ಯಪತ್ರ ವಿಭಾಗದ ಹಾಗೂ ಕಾರ್ಯಾಗಾರದ 100ಕ್ಕೂ ಹೆಚ್ಚುಸಿಬ್ಬಂದಿ ರಾಜ್ಯಪತ್ರದ ಪ್ರಕಟಣೆ ಹಾಗೂ ಮುದ್ರಣದಲ್ಲಿ ನಿರತರಾಗಿದ್ದಾರೆ. ಮುದ್ರಣ ಲೇಖನ ಸಾಮಗ್ರಿ ಮತ್ತು ಪ್ರಕಟಣೆಗಳ ಇಲಾಖೆಯು ಕರ್ನಾಟಕ ಸರ್ಕಾರದ ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಇಲಾಖೆಯ ಅಧೀನದಲ್ಲಿ ಕಾರ್ಯ ನಿರ್ವಹಿಸುತ್ತಿದೆ.

ಸಂಕಲನಾಧಿಕಾರಿಗಳು
ಕರ್ನಾಟಕ ರಾಜ್ಯಪತ್ರ
ಸರ್ಕಾರಿ ಕೇಂದ್ರ ಮುದ್ರಣ,ಲೇಖನ ಸಾಮಗ್ರಿ
ಮತ್ತು ಪ್ರಕಟಣೆಗಳ ಇಲಾಖೆ,ಬೆಂಗಳೂರು-59.


ಈ ಜಾಲತಾಣವನ್ನು ನ್ಯಾಷನಲ್ ಇನ್ ಫಾಮ್ಯಾಟಿಕ್ಸ್ ಸೆಂಟರ್, ವಿದ್ಯುನ್ಮಾನ ಮತ್ತು ಮಾಹಿತಿ ತಂತ್ರಜ್ಞಾನ ಮಂತ್ರಾಲಯ ಭಾರತ ಸರ್ಕಾರ
ಇವರು ವಿನ್ಯಾಸಗೊಳಿಸಿ ನಿರ್ವಹಿಸುತ್ತಿದ್ದಾರೆ.ಇದರಲ್ಲಿನ ಅಡಕಗಳನ್ನು ಸಂಕಲನಾಧಿಕಾರಿಗಳು, ಕರ್ನಾಟಕ ರಾಜ್ಯಪತ್ರ,ಸರ್ಕಾರಿ ಕೇಂದ್ರ ಮುದ್ರಣಾಲಯ,
ಬೆಂಗಳೂರು ಇವರು ಪೂರೈಕೆ ಮಾಡಿ, ಅಪ್ ಲೋಡ್ ಮಾಡಿ ಅನುಮೋದಿಸಿರುತ್ತಾರೆ.

ಮುಖಪುಟ | ನಮ್ಮ ಬಗ್ಗೆ | ರಾಜ್ಯಪತ್ರ ಹುಡುಕಿ | ಡಿಜಿಟಲ್ ಡೈರೆಕ್ಟರಿ | ಸುತ್ತೋಲೆಗಳು | ಹಕ್ಕುತ್ಯಾಗ(ಡಿಸ್ಕ್ಲೈಮರ್) | ನಮ್ಮನ್ನು ಸಂಪರ್ಕಿಸಿ | ಸಹಾಯ